ನಾನು ಕ್ರೈಸ್ತನಾಗುವುದು ಹೇಗೆ?
ನೀನು ಒಳ್ಳೆಯ ವ್ಯಕ್ತಿಯಾಗಿದ್ದೀ ಎಂದು ಭಾವಿಸಿಕೊಂಡಿದ್ದೀ. ಅತ್ಯುತ್ತಮನಾದ ವ್ಯಕ್ತಿಯಾಗಬೇಕೆಂದು ನೀನು ಯಾವಾಗಲೂ ಪ್ರಯತ್ನಿಸುತ್ತಾ ಇದ್ದೀ, ಮತ್ತು ಸರಿಯಾಗಿರುವುದನ್ನೇ ಮಾಡಲಿಕ್ಕೆ ಪ್ರಯತ್ನಿಸುತ್ತಾ ಇದ್ದೀ. ನಿನ್ನ ಜೀವನದಲ್ಲಿ ನೀನು ಮಾಡುವ ಒಳ್ಳೆಯ ಕಾರ್ಯಗಳು ಕೆಟ್ಟವುಗಳಿಗಿಂತಲೂ ಹೆಚ್ಚಾಗಿವೆ. ಇವನ್ನೆಲ್ಲಾ ಮಾಡಿದರೂ ನೀನು ಬರಿದಾದ ವ್ಯಕ್ತಿಯಾಗಿ, ಅತೃಪ್ತನಾಗಿ, ನಿರರ್ಥಕವಾದವನಾಗಿ, ಒಂಟಿಯಾದ ವ್ಯಕ್ತಿಯಾಗಿಯೇ ಇದ್ದೀ ಎಂದು ನಿನಗೆ ಅನಿಸುತ್ತದಲ್ಲವೇ?
ಇದಕ್ಕಾಗಿ ಮಾದಕಪದಾರ್ಥಗಳು, ಲೈಂಗಿಕ ಚಟುವಟಿಕೆಗಳು, ಐಹಿಕ ವಸ್ತುಗಳ ಅನುಭೋಗ, ಔತಣಪ್ರಸ್ತಗಳಲ್ಲಿ ಪಾಲುಗೊಳ್ಳುವಿಕೆ ಮತ್ತು ಕೆಲವರೊಡನೆ ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂಥಾ ರೀತಿಯಲ್ಲಿ ನಿನ್ನ ಬೇಸರವನ್ನು ಕಳೆಯಲು ಪ್ರಯತ್ನಿಸಿರಬಹುದು.

ಆದರೆ ಇನ್ನೂ ನಿನ್ನಲ್ಲಿ ಯಾವುದೋ ಶೂನ್ಯತೆಯಿರುವುದು ಕಂಡುಬರುತ್ತದೋ? ಆ ಖಾಲಿ ಎಡೆಯನ್ನು ತುಂಬಿಸುವುದಕ್ಕೆ ಒಬ್ಬನಿದ್ದಾನೆ - ಆತನು ದೇವರು. ನೀನು ನಿನ್ನ ಜೀವನವನ್ನು ಸರಿಪಡಿಸಲಿಕ್ಕೆ ಅನೇಕ ಕಾರ್ಯಗಳನ್ನು ಪ್ರಯತ್ನಿಸಿ ಅದು ನಡೆಯಲಿಲ್ಲವೆಂದರೆ ಆತನೇ ಅವೆಲ್ಲವುಗಳಿಗೆ ಪರಿಹಾರಿಯಾಗಿದ್ದಾನೆ.
ನಮ್ಮ ಜೀವಿತಕ್ಕಾಗಿ ದೇವರು ನಮಗೆ ಸತ್ಯವೇದವೆಂಬ ಒಂದು ಕೈಪಿಡಿಯನ್ನು ಕೊಟ್ಟಿರುತ್ತಾನೆ. ದೇವರೇ ಕೃತಿಕರ್ತೃವಾಗಿದ್ದು ಅದರಲ್ಲಿ ಸಲಹೆಗಳಾಗಿ ಪ್ರಾಮುಖ್ಯವಾದ ಸತ್ಯಗಳನ್ನು ಕೊಟ್ಟಿದ್ದಾನೆ. ನಾವು ಸಂತೋಷದಿಂದ, ನಂಬಿಕೆ ಮತ್ತು ಸಮಾಧಾನದಿಂದ ಇರುವುದು ಹೇಗೆ ಎಂಬುದನ್ನು ತಿಳುಕೊಳ್ಳಲು ಸಹಾಯವಾಗುವಂತೆ ಅದನ್ನು ಕೊಟ್ಟಿದ್ದಾನೆ. ನೀನು ಎದುರುಗೊಳ್ಳುತ್ತಿರುವ ಸಮಸ್ಯೆಗಳಿಗೂ, ಶೂನ್ಯತೆಗೂ ಆತನಲ್ಲಿ ಪರಿಹಾರಕ್ಕೆ ಉತ್ತರಗಳಿವೆ.
ನೀನು ಅಕಾಸ್ಮಾತ್ತಾಗಿ ಈ ಲೋಕದಲ್ಲಿ ಬಂದವನಲ್ಲ, ಒಂದು ಉದ್ದೇಶದಿಂದಲೇ ಇದ್ದೀ. ಲೋಕಾದಿಯಿಂದಲೇ ನಾವು ಪಾಪದ ದೆಸೆಯಿಂದ ದೇವರಿಂದ ಅಗಲಿ ಸಲ್ಪಟ್ಟಿದ್ದೇವೆ. ನಮ್ಮನ್ನು ಕಾಪಾಡಲಿಕ್ಕಾಗಿ ದೇವರು ತನ್ನ ಮಗನಾದ ಯೇಸುಕ್ರಿಸ್ತನನ್ನು ಕಳುಹಿಸಿಕೊಟ್ಟನು. ಆತನು ಈ ಲೋಕದಲ್ಲಿ ಜೀವಿಸಿದನು, ನಿನ್ನ ಪಾಪಗಳಿಗಾಗಿ ದಂಡನೆಯನ್ನು ಅನುಭವಿಸಿ, ಅದರ ಕ್ರಯವನ್ನು ಸಲ್ಲಿಸಿ ಶಿಲುಬೆಯ ಮೇಲೆ ಸತ್ತನು. ಮೂರು ದಿನಗಳನಂತರ ಆತನು ಸತ್ತವರೊಳಗಿಂದ ಎದ್ದನು.
ಯೇಸು ನಿನ್ನನ್ನು ಪ್ರೀತಿಸುತ್ತಾನೆ, ನಿನ್ನೊಂದಿಗೆ ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳಲು ಆತನಿಗೆ ಅಪೇಕ್ಷೆಯಿದೆ. ಆದರೆ ಪಾಪವು ನಮ್ಮನ್ನು ಆತನಿಂದ ಅಗಲಿಸಿದೆ. ಅದಕ್ಕಾಗಿ ನೀನು ಮಾಡಬೇಕಾದದ್ದು.
ನೀನು ದೇವರ ನ್ಯಾಯತೀರ್ಪನ್ನು ಹೊಂದಲು ಯೋಗ್ಯನಾಗಿರುವ ಪಾಪಿಯೆಂದು ಒಪ್ಪಿಕೋ.
ಪ್ರತಿಯೊಬ್ಬರೂ ಜನ್ಮದಿಂದಲೇ ಪಾಪಮಾಡಿದವರು, ದೇವರ ನಿಯಮಗಳನ್ನು ಮೀರಿದವಾಗಿದ್ದೇವೆ (ರೋಮಾ ೩:೨೩). ಇದರ ಪರಿಣಾಮವಾಗಿ ಮಾನವಕುಲವು ದೇವರಿಂದ ಅಗಲಿಸಲ್ಪಟ್ಟು ದೇವರ ಕೋಪಕ್ಕೆ ಗುರಿಯಾಗಿದೆ. ನಾವು ಮಾಡುವ ಸತ್ಕ್ರಿಯೆಗಳಿಂದ ನಾವು ನಮ್ಮನ್ನು ರಕ್ಷಿಸಿಕೊಳ್ಳಲಿಕ್ಕಾಗುವುದಿಲ್ಲ (ರೋಮಾ ೬:೨೩)
ಯೇಸುಕ್ರಿಸ್ತನು ನಿನಗಾಗಿ ಸತ್ತು ಸತ್ತವರೊಳಗಿಂದ ಎದ್ದನು ಎಂಬುದನ್ನು ಗ್ರಹಿಸಿಕೋ.
ನಾವು ಪಾಪಿಗಳಾಗಿದ್ದು ನರಕದ ಕಡೆಗೆ ಓಡುತ್ತಿದ್ದೇವಾದ್ದರಿಂದ ಸಂಪೂರ್ಣ ದೇವರೂ ಸಂಪೂರ್ಣ ಮಾನವನೂ ಆದ ತನ್ನ ಕುಮಾರನಾದ ಯೇಸುವನ್ನು ದೇವರು ಕಳುಹಿಸಿಕೊಟ್ಟನು, ಆತನು ನಮ್ಮ ಪಾಪಗಳ ಶಿಕ್ಷೆಯನ್ನು ತನ್ನ ಮೇಲೆ ಹೊತ್ತುಕೊಂಡು ನಮಗಾಗಿ ಸತ್ತನು. ಮಾತ್ರವಲ್ಲದೆ ದೇವರು ಪಾಪಕ್ಕಾಗಿ ಆ ಕ್ರಯವನ್ನು ಅಂಗೀಕರಿಸಿಕೊಂಡಿದ್ದಾನೆಂಬದನ್ನು ಪ್ರಾಯೋಗಿಕವಾಗಿ ತೋರಿಸುವುದಕ್ಕಾಗಿ ಮೂರು ದಿವಸಗಳ ನಂತರ ಸತ್ತವರೊಳಗಿಂದ ಎದ್ದನು (೧ ಪೇತ್ರ ೩:೧೮; ೧ ಕೊರಿಂ ೧೫:೫).
ನಿಮ್ಮ ಪಾಪಗಳ್ಗಾಗಿ ಪಶ್ಚಾತ್ತಾಪಪಡಬೇಕು, ಕ್ರಿಸ್ತನು ನಿನಗಾಗಿ ಸತ್ತನು, ಸತ್ತವರೊಳಗಿಂದ ಎದ್ದನು ಎಂಬುದನ್ನು ನಂಬಬೇಕು.
ಕ್ರಿಸ್ತನು ಸತ್ತು ಜೀತನಾಗಿ ಎದ್ದನು ಎಂಬುದನ್ನು ಬುದ್ಧಿಪೂರ್ವಕವಾಗಿ ನಂಬುವುದು ಸಾಲದು, ಇದು ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಗದು. ದೆವ್ವಗಳೂ ಸಹಾ ಯೇಸುವು ದೇವರ ಕುಮಾರನೆಂದು ಬುದ್ಧಿಪೂರ್ವಕವಾಗಿ ನಂಬುತ್ತವೆ. ಆದರೆ ಅವು ಪರಲೋಕಕ್ಕೆ ಹೋಗುವುದಿಲ್ಲ (ಯಾಕೋ ೨:೧೪,೧೫). ನೀನು ರಕ್ಷಣೆಹೊಂದಬೇಕೆಂದರೆ ನಿನ್ನ ಪೂರ್ಣ ಹೃದಯದಿಂದ ಪ್ರಾಮಾಣಿಕವಾಗಿ ಪಾಪಗಳನ್ನು ಬಿಟ್ಟು ಬರಬೇಕು. ದೇವರ ಬಳಿಯಲ್ಲಿ ಕ್ಷಮಾಪಣೆ ಪಡೆದುಕೊಳ್ಳಬೇಕು, ಮತ್ತು ಅವುಗಳಿಗಾಗಿ ಪಶ್ಚಾತ್ತಾಪಪಡಬೇಕು (ಅ.ಕೃ.೨೬:೨೦).ಕ್ರಿಸ್ತನು ನಿನ್ನ ಸ್ಥಾನದಲ್ಲಿ ನಿನ್ನ ಪಾಪಕ್ಕಾಗಿ ಸತ್ತನು ಮತ್ತು ಸತ್ತವರೊಳಗಿಂದ ಎದ್ದನು ಎಂದು ನಂಬಬೇಕು (ರೋಮಾ ೧೦:೯,೧೦). ನೀನು ಹೀಗೆ ಮಾಡುವಾಗ ಪರಲೋಕಕ್ಕೆ ಹೋಗಲು ನಿನ್ನ ಸತ್ಕ್ರಿಯೆಗಳನ್ನಲ್ಲ, ಕ್ರಿಸ್ತನನ್ನು ಆತುಕೊಳ್ಳುವಿ (ತೀತ ೩:೪,೫)
ರಕ್ಷಣೆಯೆಂಬುದು ಏನೋ ಒಂದು ವಿಧದ ಸಾಮಾನ್ಯ ಕಾರ್ಯವಲ್ಲ, ಅದು ದೇವರಿಂದ ಕೃಪೆಯಿಂದ ಅನುಗ್ರಹಿಸಲ್ಪಟ್ಟದ್ದು, ಅದಕ್ಕೆ ನೀನು ಅರ್ಹನೂ ಅಲ್ಲ. ಅದು ಅರ್ಹತೆಯಿಲ್ಲದವರಿಗೆ ಕೊಡಲ್ಪಟ್ಟ ದೇವರ ದಯೆ, ಅದು ನಿತ್ಯಜೀವದ ವರವಾಗಿದೆ.
ಯೇಸುಕ್ರಿಸ್ತನ ಮೂಲಕ ಸಿಕ್ಕುವ ನಿತ್ಯಜೀವದ ವರವನ್ನು ಹೊಂದಿಕೊಳ್ಳಲು ಸಿದ್ಧನಾಗಿದ್ದರೆ, ಮತ್ತು ನಿಜವಾಗಿ ಆತನನ್ನು ನಿನ್ನ ವೈಯಕ್ತಿಕ ರಕ್ಷಕನಾಗಿಯೂ ಕರ್ತನಾಗಿಯೂ ನಿನ್ನ ಹೃದಯದೊಳಗೆ ಅಂಗೀಕರಿಸಿಕೊಳ್ಳಲು ಇಷ್ಟಪಟ್ಟರೆ ಈ ಪ್ರಾರ್ಥನೆಮಾಡು:
"ಯೇಸುವೇ ನಾನು ಒಬ್ಬ ಪಾಪಿಯೆಂದು ನನಗೆ ಗೊತ್ತು, ನೀನು ನನ್ನ ಪಾಪಗಳಿಗಾಗಿ ಸತ್ತಿ ಎಂದೂ, ನನಗೆ ಪರಲೋಕದಲ್ಲಿ ನಿತ್ಯಜೀವವನ್ನು ಕೊಡಲಿಕ್ಕಾಗಿ ಸಮಾಧಿಯಿಂದ ಎದ್ದು ಬಂದಿ ಎಂದೂ ನಂಬುತ್ತೇನೆ. ನಾನು ಮನಃಪೂರ್ವಕವಾಗಿ ಪಾಪಗಳಿಗಾಗಿ ಪಶ್ಚಾತ್ತಾಪಪಡುತ್ತೇನೆ, ನಿನ್ನನ್ನು ನನ್ನ ಹೃದಯದೊಳಗೂ ನನ್ನ ಜೀವಿತದೊಳಗೂ ಬರಬೇಕೆಂದು ಬೇಡುತ್ತೇನೆ. ನನ್ನ ಮಾತುಗಳನ್ನೂ, ಯೋಚನೆಗಳನ್ನೂ, ಕ್ರಿಯೆಗಳನ್ನೂ ನಿನ್ನ ವಶಕ್ಕೆ ತೆಗೆದುಕೋ. ನನ್ನ ರಕ್ಷಣೆಗಾಗಿ ನನ್ನ ಎಲ್ಲಾ ಭರವಸವನ್ನೂ ನಿನ್ನಲ್ಲಿ ಇಡುತ್ತೇನೆ. ನಿನ್ನನ್ನು ನನ್ನ ಕರ್ತನನ್ನಾಗಿಯೂ, ರಕ್ಷಕನನ್ನಾಗಿಯೂ ಮತ್ತು ನಿತ್ಯಜೀವದ ವರವನ್ನೂ ಅಂಗೀಕರಿಸಿಕೊಳ್ಳುತ್ತೇನೆ. ಆಮೆನ್"
ಈ ಪ್ರಾರ್ಥನೆಮಾಡಿ ಕ್ರಿಸ್ತನನ್ನು ಅಂಗೀಕರಿಸಿಕೊಂಡಿದ್ದರೆ, ಅದನ್ನು ನಮಗೆ ತಿಳಿಯಪಡಿಸು. ಆ ಸಂತೋಷವನ್ನು ನಿನ್ನೊಂದಿಗೆ ಕೊಂಡಾಡುವೆವು. ಯಾವುದಾದರೂ ಪ್ರಶ್ನೆಗಳಿದ್ದರೆ ಅಥವಾ ಏನಾದರೂ ಕೇಳಬೇಕೆಂದಿದ್ದರೆ ನಮಗೆ ದಯವಿಟ್ಟು ತಿಳಿಯಪಡಿಸಿರಿ ಮತ್ತು ಕರೆಯಿರಿ. ನೀವು ಕರ್ತನೊಡನೆ ಜೀವಿಸುವುದಕ್ಕೆ ನಮ್ಮ ಪ್ರೋತ್ಸಾಹವಿದೆ.