ನಾನು ಕ್ರೈಸ್ತನಾಗುವುದು ಹೇಗೆ?
ನೀನು ಒಳ್ಳೆಯ ವ್ಯಕ್ತಿಯಾಗಿದ್ದೀ ಎಂದು ಭಾವಿಸಿಕೊಂಡಿದ್ದೀ. ಅತ್ಯುತ್ತಮನಾದ ವ್ಯಕ್ತಿಯಾಗಬೇಕೆಂದು ನೀನು ಯಾವಾಗಲೂ ಪ್ರಯತ್ನಿಸುತ್ತಾ ಇದ್ದೀ, ಮತ್ತು ಸರಿಯಾಗಿರುವುದನ್ನೇ ಮಾಡಲಿಕ್ಕೆ ಪ್ರಯತ್ನಿಸುತ್ತಾ ಇದ್ದೀ. ನಿನ್ನ ಜೀವನದಲ್ಲಿ ನೀನು ಮಾಡುವ ಒಳ್ಳೆಯ ಕಾರ್ಯಗಳು ಕೆಟ್ಟವುಗಳಿಗಿಂತಲೂ ಹೆಚ್ಚಾಗಿವೆ. ಇವನ್ನೆಲ್ಲಾ ಮಾಡಿದರೂ ನೀನು ಬರಿದಾದ ವ್ಯಕ್ತಿಯಾಗಿ, ಅತೃಪ್ತನಾಗಿ, ನಿರರ್ಥಕವಾದವನಾಗಿ, ಒಂಟಿಯಾದ ವ್ಯಕ್ತಿಯಾಗಿಯೇ ಇದ್ದೀ ಎಂದು ನಿನಗೆ ಅನಿಸುತ್ತದಲ್ಲವೇ? ಇದಕ್ಕಾಗಿ ಮಾದಕಪದಾರ್ಥಗಳು, ಲೈಂಗಿಕ ಚಟುವಟಿಕೆಗಳು, ಐಹಿಕ ವಸ್ತುಗಳ ಅನುಭೋಗ, ಔತಣಪ್ರಸ್ತಗಳಲ್ಲಿ ಪಾಲುಗೊಳ್ಳುವಿಕೆ ಮತ್ತು ಕೆಲವರೊಡನೆ ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂಥಾ ರೀತಿಯಲ್ಲಿ ನಿನ್ನ ಬೇಸರವನ್ನು ಕಳೆಯಲು ಪ್ರಯತ್ನಿಸಿರಬಹುದು. ಆದರೆ ಇನ್ನೂ ನಿನ್ನಲ್ಲಿ …